Posts

ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು.!

Image
ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು. ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..   ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ... ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್...

ಮಾತುಗಳು-ಬುಲೆಟ್‌ನಂತಹವು, ಅಳೆದು ತೂಗಿ ಮಾತನಾಡಬೇಕು, ಇತರರನ್ನು ನೋಯಿಸದಂತೆ ಮಾತನಾಡಬೇಕು

Image
“ಕೋಪ ಬರುತ್ತಿದೆ” ಎಂದು ಮಗ ಪ್ರತಿ ಸಲ ಹೇಳಿದಾಗ…ಗೋಡೆಗೆ ಮೊಳೆ ಹೊಡಿ ಎನ್ನುತ್ತಾನೆ ತಂದೆ! ಯಾಕೆ ಗೊತ್ತಾ? ಗೋಡೆಗೆ ಹೊಡೆದ ಮೊಳೆಗಳು…ಅದ್ಭುತವಾದ ಜೀವನ ಸತ್ಯ ಮಗನೊಬ್ಬನಿಗೆ…ತಂದೆ ಕೆಲವು ಮೊಳೆಗಳನ್ನು ಕೊಟ್ಟು…ನಿನಗೆ ನಿತ್ಯ ಎಷ್ಟು ಮಂದಿಯ ಮೇಲೆ ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡಿ ಎಂದು ಹೇಳುತ್ತಾನೆ..! ಮೊದಲ ದಿನ 20, ಬಳಿಕ 15, ಮೂರನೇ ದಿನ 10 ಹೀಗೆ.. ತನ್ನ ಕೈಯಲ್ಲಿ ಇರುವ ಮೊಳೆಗಳನ್ನೆಲ್ಲಾ ಗೋಡೆಗೆ ಹೊಡೆದುಬಿಟ್ಟ ಮಗ. ಮೊಳೆಗಳು ಮುಗಿದ ಕೂಡಲೆ…ಮಗ ತಂದೆ ಬಳಿ ಬಂದು ಅಪ್ಪಾ ನೀವು ಕೊಟ್ಟ ಮೊಳೆಗಳೆಲ್ಲಾ ಮುಗಿದುಹೋದವು ಎಂದ. ಓ…ಅಂದರೆ ನಿನಗೆ ತುಂಬಾ ಮಂದಿ ಮೇಲೆ ಕೋಪ ಬಂದಂತಿದೆ.. ಎನ್ನುತ್ತಾರೆ ತಂದೆ..! ಆ…ಆದರೆ… ನಾಳೆಯಿಂದ ನಿತ್ಯ ಕೆಲವು ಮೊಳೆಗಳನ್ನು ಗೋಡೆಗೆ ನೀನು ಹೊಡೆದ ಮೊಳೆಗಳನ್ನು ತೆಗೆದುಬಿಡು ಎಂದು ಮಗನಿಗೆ ತಂದೆ ಹೇಳುತ್ತಾನೆ… ತಂದೆ ಹೇಳಿದಂತೆ…ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದ ಮಗ.. ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಟ್ಟ. ಏನಾಯಿತು ಎಂದು ಮಗನನ್ನು ಕೇಳಿದ ತಂದೆ…ಗೋಡೆಗೆ ಹೊಡೆದ ಮೊಳೆಗಳನ್ನೆಲ್ಲಾ ತೆಗೆದುಬಿಟ್ಟೆ ಅಪ್ಪ ಎಂದ ಮಗ. ಹಾಗಿದ್ದರೆ ಗೋಡೆ ಹೇಗಿದೆ? ಮೊಳೆಗಳೇನೋ ತೆಗೆದುಬಿಟ್ಟೆ..ಆದರೆ ಇದರಿಂದ ಗೋಡೆಗೆ ಆದ ರಂಧ್ರಗಳು ಮಾತ್ರ ಹಾಗೆಯೇ ಇವೆ ಎಂದ ಮಗ. ಆಗ ತಂದೆ…ಮಗನೊಂದಿಗೆ.. “ನೋಡಿದೆಯಾ”.. ಮೊಳೆಗಳನ್ನು ಹೊಡೆಯುವಾಗ ಸುಲಭವಾಗಿ ಹೊಡೆದೆ.....

ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ 35 ನಿಯಮ ಪಾಲಿಸಬೇಕು

Image
1. ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ. 2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ, ಮಧ್ಯದಲ್ಲೇ ನಿಲ್ಲಿಸಬೇಡಿ. 3. ಅವರ ಅಭಿಪ್ರಾಯ ಒಪ್ಪಿಕೊಳ್ಳಿ. 4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ. 5. ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ. 6. ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ. 7. ದುಃಖದ ವಿಷಯ ಆದಷ್ಟೂ ಅವಾಯಿಡ್ ಮಾಡಿ. 8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ. 9. ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ. 10. ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ. 11. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ. 12. ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ. 13. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ. 14. ಅವರ ಮಾತನ್ನು ತೆಗಳಬೇಡಿ. 15. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ. 16. ಅವರ ವಯಸ್ಸಿಗೆ ಬೆಲೆಕೊಡಿ. 17. ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ. 18. ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ. 19. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ. 20. ಅವರ ಮುಂದೆ ಜೋರಾಗಿ ಮಾತನಾಡಬೇಡಿ. 21. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ. 22. ಅವರ ಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ. 23...

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕೂ ಸವೆಯದ ನೆನಪು

Image
"ಮನೆ ಮಂದಿಯೆಲ್ಲಾ ಒಂದೇ ಸಾಬೂನು, ಉಪಯೋಗಿಸುತ್ತಿದ್ವಿ" *ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ* *ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು* *ಯಾವತ್ತೋ ಒಂದು ದಿನ ಮಾಡುತ್ತಿದ್ದ ವಿಶೇಷ ತಿಂಡಿಗಳ ರುಚಿ ಈಗ ಇಲ್ಲ* *ಬೆಲ್ಲ ಕ್ಯಾಂಡಿ ತಿನ್ನೋದು ಯಾವಾಗಲೋ ನಿಲ್ಲಿಸಿದೆವು* *ಅಪ್ಪ ತರುತ್ತಿದ್ದ ಬಟ್ಟೆಯ ಸಂಭ್ರಮ ಇವತ್ತಿನ ಮಾಲ್ ನಲ್ಲಿ ಸಿಗುತ್ತಿಲ್ಲ* *ಕಾದಂಬರಿ ಓದೋರ ಒಂದು ಬಳಗವೇ ಇರುತ್ತಿತ್ತು* *ಊರ ಜಾತ್ರೆಗಿಂತ ದೊಡ್ಡ ಪ್ರೋಗ್ರಾಮ ಇರಲೇ ಇಲ್ಲ* *ಎಲ್ಲಾ ಧರ್ಮದವರು ಒಟ್ಟಿಗೆ ಹಬ್ಬ ಆಚರಿಸ್ತಾ ಇದ್ದೆವು* *ಜ್ವರಕ್ಕೆ ಅಮ್ಮನ ಕಾಫಿ/ಕಷಾಯ ಸಾಕಾಗ್ತಾ ಇತ್ತು* *ಕಿವಿ ನೋವು, ಹೊಟ್ಟೆ ನೋವು, ಶೀತ, ಕೆಮ್ಮು, ಗಂಟಲು ನೋವು ಖಾಯಿಲೆ ಅಂದ್ರೆ ಇವಷ್ಟೇ ಆಗಿತ್ತು* *ಸಕ್ಕರೆ ಖಾಯಿಲೆ ಆವಾಗ ಶ್ರೀಮಂತರಿಗೆ ಮಾತ್ರ* *ಬಿಲ್ಡಿಂಗಿಗಿಂತ ಮರಗಳೇ ಜಾಸ್ತಿ ಇದ್ದವು* *ಲಗೋರಿ, ಮರಕೋತಿ ಆಟ,ಚಿನ್ನಿದಾಂಡು ಕ್ರಿಕೆಟ್ ಹುಡುಗರಿಗೆ ಕುಂಟಾಬಿಲ್ಲೆ, ಕೊಕೊ,ಚೌಕಾಬರ, ಹುಡುಗಿಯರ ಆಟ ಆಗಿತ್ತು* *ಭೂತದ ಮನೆ, ಭೂತ ಬಂಗ್ಲೆ ಊರಿಗೊಂದು ಇರುತ್ತಿತ್ತು* *ಸಂಜೆ ಏಳಕ್ಕೆ ಎಲ್ಲಾ ಮನೆಲಿ ಇರುತ್ತಿದ್ವಿ* *ಆದಿತ್ಯವಾರ ಗಂಡುಮಕ್ಕಳು ಕೂದಲು ಕಟ್ಟಿಂಗೆ ಲೈನ್ ಕಾಯ್ತಾ ಇದ್ದರು* *ಹುಡುಗೀರಿಗೆ ಅಮ್ಮನದ್ದೆ ಬ್ಯೂಟಿ ಪಾರ್ಲರ್* *ದೊಡ್ಡೋರ ಅಂಗಿ ಸಣ್ಣವರಿಗ...

"ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರ ಖರೀದಿ ಮಾಡಲು ಸಾಧ್ಯವಿಲ್ಲ.!

Image
ಒಂದು ಊರಿನಲ್ಲಿ 3 ಮಹಿಳೆಯರು ನೀರು ತುಂಬಿಸುತ್ತಿದ್ದರು. ಮೊದಲನೆಯವಳ ಮಗ ಶಾಲೆಯಿಂದ ಅದೇ ದಾರಿಯಲ್ಲಿ ಹೋಗುತ್ತಿರುವಾಗ ತಾಯಿಯ ಕಡೆಗೆ ನೋಡಿದ . ಆವಾಗ ತಾಯಿ" ಅವನೇ ನನ್ನ ಮಗ,ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾನೆ" ಸ್ವಲ್ಪ ಸಮಯದ ನಂತರ ಎರಡನೆಯವಳ ಮಗ ಅದೇ ದಾರಿಯಿಂದ ಶಾಲೆಯಿಂದ ಹಿಂತಿರುಗುವುದನ್ನು ತೋರಿಸಿ "ಅವನೇ ನನ್ನ ಮಗ, ಸಿಬಿಎಸ್ಇನಲ್ಲಿ ಒದುತ್ತಿದ್ದಾನೆ" ಅವನ ಹಿಂದಿನಿಂದ ಮೂರನೆಯವಳ ಮಗ ಕೂಡಾ ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ.ತಾಯಿಯನ್ನು ನೋಡಿ ಅವಳ ಹತ್ತಿರ ಬಂದು ನೀರಿನಿಂದ ತುಂಬಿದ ಕೊಡವನ್ನು ಹೆಗಲ ಮೇಲೆ ಮತ್ತು ಬಾಲ್ದಿ ಯನ್ನು ಇನ್ನೊಂದು ಕೈಯಲ್ಲಿ ಹಿಡಿದು ತಾಯಿಯ ಕಡೆ ನೋಡಿ" ಅಮ್ಮ ಬನ್ನಿ ಮನೆಗೆ ಹೋಗುವ" ಅಂದ. ತಾಯಿ ಅವನ ಕಡೆ ಕೈ ತೋರಿಸಿ, ಸಂತೋಷದಿಂದ  " ಇವನೇ ನನ್ನ ಮಗ, ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾನೆ" ಅಂದಳು.  ಇದನ್ನು ಕೇಳಿ ಮತ್ತಿಬ್ಬರು ನಾಚಿಕೆಯಿಂದ ತಲೆ ಬಾಗಿಸಿದರು. ಮೇಲಿನ ಕತೆಯ ತಾತ್ಪರ್ಯ ಇಷ್ಟೆ, "ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರ ಖರೀದಿ ಮಾಡಲು ಸಾಧ್ಯವಿಲ್ಲ.........!!" ಕೃಪೆ: ಅಂತರ್ಜಾಲ 

*"ಇರುವ ಭಾಗ್ಯವ ನೆನೆದು ಬಾರೆನೆಂಬುವುದನು ಬಿಡು"*

Image
     ಭಿಕ್ಷುಕನೋರ್ವˌ ಒಂದು ಮನೆಗೆ ಬಿಕ್ಷೆಯಾಚಿಸುತ್ತಾ ಹೋಗುತ್ತಾನೆ. ಆತ ಆ ಮನೆಯನ್ನು ನೋಡುತ್ತಾನೆ ಅದು ಮನೆ ಅಲ್ಲˌ ಅರಮನೆ ನೋಡಿ ಮುಗಿಸಲು ಎರಡು ಕಣ್ಣು ಸಾಲದು. ಹೊರಗಡೆ ಐಶರಾಮಿ ಕಾರುಗಳು ಸಾಲುಗಟ್ಟಿ ನಿಂತಿವೆ.  ಹೊರಾಂಗಣದಲ್ಲಿ ಅರಮನೆಯ ಒಡೆಯ ಕಪ್ಪು ಕೂಲಿಂಗ್ ಗ್ಲಾಸೊಂದನ್ನ ಹಾಕಿ ಐಶಾರಾಮಿ ಕುರ್ಚಿಯಲ್ಲಿ ಕುಳಿತಿದ್ದಾನೆ. ಅವನ ಪಕ್ಕದಲ್ಲಿ ಸುಂದರಿಯಾದಂತಹ ಪತ್ನಿಯೂ ಇದ್ದಾಳೆ. ತಂದೆ—ತಾಯಿಯ ಸೇವೆಗೆ ಸದಾ ಸಿಧ್ಢರಾಗೋ ಮಕ್ಕಳೂ ಇದ್ದಾರೆ. ಇದನ್ನೆಲ್ಲಾ ಗಮನಿಸಿದ ಭಿಕ್ಷುಕ ಹೇಳಿದˌ "ಓ ಯಜಮಾನಾರೇ.... ಓ ಯಜಮಾನರೇ...... ನೀವೆಷ್ಟು ಭಾಗ್ಯವಂತರುˌ ದೇವರು ನಿಮಗೆ ಎಷ್ಟು ಅನುಗ್ರಹ ನೀಡಿದ್ದಾನೆ. ನಿಜಕ್ಕೂ ನೀವು ಭಾಗ್ಯವಂತ  ನಿಮಗೆ ದೇವರು ಅರಮನೆ ನೀಡದಿದ್ದಾನಲ್ಲವೇ..? ನನಗೆ ಒಂದಿಂಚು ಭೂಮಿಯೂ ಇಲ್ಲ. ನಿಮಗೆ ದೇವರು ಐಶಾರಾಮಿ ಕಾರು ನೀಡಿದ್ದಾನಲ್ಲವೇ...?ನನಗೆ ಸರಿಯಾದ ಚಪ್ಪಲಿಯೂ ಇಲ್ಲ. ನಿಮಗೆ ಸುಂದರಿಯಾದ ಪತ್ನಿಯೂ ಇದ್ದಾಳೆˌ ನನಗೆ ಯಾರು ಹೆಣ್ಣು ಕೊಡುವವರು, ಆದ್ದರಿಂದ ಮಕ್ಕಳೂ ಇಲ್ಲ. ನಿಜಕ್ಕೂ ನೀವು ಭಾಗ್ಯವಂತರು... ಇದನ್ನ ಕೇಳಿದ ಯಜಮಾನ ಭಿಕ್ಷುಕನೊಂದಿಗೆ ಹೇಳಿದ - *"ದೇವರು ನನಗೆ ನೀಡದಂತಹ ಒಂದು ದೊಡ್ಡ ಅನುಗ್ರಹವನ್ನ ನಿನಗೆ ನೀಡಿದ್ದಾನೆ"* ಭಿಕ್ಷುಕ ಅಚ್ಚರಿಯೊಂದಿಗೆˌ ಅದೇನೆಂದು ಕೇಳುತ್ತಾನೆ. ಯಜಮಾನˌ ತನ್ನ ಕನ್ನಡಕವನ್ನ ತೆಗೆದು ಹೇಳುತ್ತಾನೆˌ *"ದೇವರು ನನಗೆ ಎರಡೂ ಕಣ್ಣನ್ನು ...

ದೃಢತೆ ಮತ್ತು ವಿಶಿಷ್ಟತೆ ನಮ್ಮದಾಗಿರಲಿ

Image
ಒಂದು ಉತ್ತಮ ರಸ್ತೆ ಒಬ್ಬ ಉತ್ತಮ ಚಾಲಕನನ್ನು ಸೃಷ್ಟಿಸಲು ಸಾಧ್ಯವಿಲ್ಲವೋ, ಒಂದು ತಿಳಿ ಆಕಾಶ ಹೇಗೆ ಉತ್ತಮ ಪೈಲಟ್‌ನನ್ನು ನಿರೂಪಿಸಲು ಸಾಧ್ಯವಿಲ್ಲವೋ ಹಾಗೆಯೇ ಜೀವನ ದಲ್ಲಿ ಕಷ್ಟ, ಸೋಲು,ಅವಮಾನ ಇಲ್ಲದಿದ್ದರೆ ನಾವು ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಬದುಕು ಅನುಭವಿಸಲೆಂದೇ ಇರುವಂಥದ್ದು. ಆದರೆ ಅರಿವು ಮತ್ತು ಇತರರ ಅನುಭವದ ಸಾರವನ್ನು ಜೊತೆಗಿಟ್ಟುಕೊಂಡಾಗಲೇ ಜೀವನದಲ್ಲಿಸಂತೃಪ್ತಿಯೆಡೆಗೆ ಸಾಗಬಹುದು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಯಾವುದೂ ಶಾಶ್ವತವಲ್ಲ ಎನ್ನುವ ನಿತ್ಯಸತ್ಯ ವಿರಕ್ತಿಗೆ ಪೂರಕವಾಗಬಾರದು. ಬದಲಿಗೆ ಅದು ಇ ರುವಾಗ ಅದನ್ನು ಒಳ್ಳೆಯ ರೀತಿಯಿಂದ ಬಳಸಿ ಕೊಳ್ಳುವುದು ನಮ್ಮ ಗುರಿಯಾಗಬೇಕು. ನಮ್ಮ ಮಧ್ಯೆ ಸಾವಿರ ಜನ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಲೇ ಇರುತ್ತಾರೆ. ಆದರೆ ನಮ್ಮ ಜೀವನವನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಆತ್ಮವಿಶ್ವಾಸ ಇದ್ದಲ್ಲಿ ಎಲ್ಲವನ್ನೂ ಮೆಟ್ಟಿ ನಿಲ್ಲಬಹುದು. ಕೆಲವರು ಪ್ರಶ್ನೆ ಹಾಕಬಹುದು ಬರಿಯ ಆತ್ಮವಿಶ್ವಾಸ ಇದ್ರೆ ಸಾಕಾ? ಎಂದು. ನಿಜ ಆತ್ಮವಿಶ್ವಾಸದಿಂದ ಎಲ್ಲವೂ ಆಗುವುದಿಲ್ಲ. ಆದರೆ ಮಳೆ ಬಂದಾಗ ಕೊಡೆ ಯಿಂದ ಮಳೆಯನ್ನು ನಿಲ್ಲಿಸಲು ಆಗದೇ ಇರಬಹುದು ಆದರೆ ಕೊಡೆಯಿಂದ ನಮ್ಮನ್ನ ರಕ್ಷಿಸಿಕೊಳ್ಳಬಹುದು ಅಲ್ವ. ಬಹಳ ಸಲ ನಾವು ನಮ್ಮ ಬಗ್ಗೆ ಯೋಚಿಸುವ ಬದಲು ಬೇರೆಯವರು ನಮ್ಮ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ ಅವರು ನನ್ನ ಬಗ್ಗೆ ಏನು ಅಂದುಕ...

"ಸಂಸ್ಕಾರವಂತ ತಾಯಿಯೇ ದೇವರು ಆಚಾರವಂತ ಮನೆಯೇ ದೇವಾಲಯ"

Image
ಒಂದು ದಿನ ಮಗು  ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು   ತನ್ನ ತಾಯಿಯ ಕೈಗೆ   ಒಂದು ಪತ್ರ ಕೊಡುತ್ತಾನೆ, ಅಮ್ಮಾ, ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ ಅದನ್ನು  ಮಗನಿಗಾಗಿ ಗಟ್ಟಿಯಾಗಿ ಓದುತ್ತಾ   ಆ ತಾಯಿಯ ಕಣ್ಣು ಒದ್ದೆಯಾಯಿತು : "ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ.   ನಮ್ಮ ಶಾಲೆ   ಅವನ ಬುದ್ಧಿಮತ್ತೆಗೆ   ತುಂಬಾ ಸಣ್ಣದು   ಹಾಗೂ ಅವನಿಗೆ ಕಲಿಸಬಲ್ಲ ಅರ್ಹತೆ ನಮ್ಮ   ಯಾವ ಉಪಾಧ್ಯಾಯರಿಗೂ ಇಲ್ಲ.   ಆದುದರಿಂದ  ಅವನ ವಿದ್ಯಾಭ್ಯಾಸವನ್ನು ನೀವೇ ಮನೆಯಲ್ಲಿ ಕಲಿಸುವುದು ಒಳಿತು." ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ, ಆಗ ಎಡಿಸನ್   ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ. ಆ ಸಂದರ್ಭದಲ್ಲಿ   ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ   ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು   ಬಿಡಿಸಿ ನೋಡಿದರೆ   ಅದರಲ್ಲಿ ಹೀಗೆ ಬರೆದಿರುತ್ತದೆ. : "ನಿನ್ನ ಮಗ   ಒಬ್ಬ ಬುದ್ಧಿಮಾಂದ್ಯ,   ಅವನನ್ನು ನಾವು   ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ," ತನ್ನ ಮಗುವಿನ ಮೃದು ಮನಸ್ಸನ್ನು ನೋಯಿಸದಿರಲು ಅಂದು ವಿರುದ್ಧವಾಗಿ   ಓದಿದ ತಾಯಿಯನ್ನು...

ಏನು ಮಾಡಿದರು ಮನಸ್ಸಿಟ್ಟು ಮಾಡು ಅದೇ ನಿನ್ನ ಯಶಸ್ಸಿನ ಮೊದಲ ಮೆಟ್ಟಿಲು!

Image
ಆತ್ಮೀಯರೇ,  ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಯಶಸ್ಸನ್ನು ಬೆನ್ನಟ್ಟಿ ಓಡುತ್ತಿದ್ದಾರೆ! ಆದರೆ ಯಶಸ್ಸೆಂಬುದು ಅಷ್ಟು ಸುಲಭವಾಗಿ ಸಿಗುವ ವಸ್ತು ಅಲ್ಲ. ಅದು ಮಾಯ ಚಿಂಕೆಯೇ  ಸರಿ.  ಯಶಸ್ಸು ಎಂಬುದನ್ನು ಹೀಗೆ ಎಂದೂ  ವಿವರಿಸಲು ಸಾಧ್ಯವಿಲ್ಲ! ಪ್ರತಿಯೊಬ್ಬರು ಒಂದೊಂದು ರೀತಿಯ ಯಶಸ್ಸನ್ನು ಬೆನ್ನಟ್ಟಿರುತ್ತಾರೆ! ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಮೊದಲು ಬರುವುದೇ ಯಶಸ್ಸು ಅನ್ನಿಸಿದರೆ, ವ್ಯಾಪಾರಿಗೆ  ತನ್ನ ವಸ್ತುಗಳನ್ನು ಅತಿ ಹೆಚ್ಚು ಮಾರಾಟ ಮಾಡಿ ಹಣ ಗಳಿಸುವುದೇ ಯಶಸ್ಸು ಆಗಿರುತ್ತದೆ. ಹೀಗೆ ವಿವಿಧ ರೀತಿಯಲ್ಲಿ ಯಶಸ್ಸನ್ನು ಪಡೆಯಲು ಹೊರಟ ಎಲ್ಲರಿಗೂ   ಯಶಸ್ಸು ಸಿಗುವುದಿಲ್ಲ. ಕಾರಣ ಪೂರ್ವ ನಿಯೋಜಿತವಾಗಿ ಗುರಿ ಸ್ಪಷ್ಟವಾಗಿ ನಿರ್ಧರಿಸದೇ  ಇರುವುದು  ಕಾರಣ.                                 ಬಾಲಿವುಡ್ ನ ಖ್ಯಾತ ನಟ ದೇವಾನಂದ್ ಒಮ್ಮೆ ಪತ್ರಿಕೆ ಸಂದರ್ಶನದಲ್ಲಿ ಯಶಸ್ಸಿನ ಬಗ್ಗೆ ಮಾತನಾಡುತ್ತಾ , ಏನು ಮಾಡಿದರು  ಮನಸ್ಸಿಟ್ಟು ಮಾಡು ಅದೇ ನಿನ್ನ ಯಶಸ್ಸಿನ ಮೊದಲ ಮೆಟ್ಟಿಲು! ಅಂತ ತಿಳಿಸಿದ್ದರು. ನಾವು ಯಾವುದೇ ಕೆಲಸ ಮಾಡುತ್ತಿರಲಿ ಅದನ್ನು ಮೊದಲು ಮನಸ್ಸಿಟ್ಟು ಮಾಡುವುದನ್ನು ಕಲಿಯಬೇಕು! ಕಾರಣ ಇವತ್ತಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡ...

ಖುಷಿಯಾಗಿರಲು ಸಾವಿರ ದಾರಿಗಳಿವೆ!!

Image
ಯಾವಾಗಲೂ ಖುಷಿ ಖುಷಿಯಾಗಿ ಇರಬೇಕೆಂಬ ಆಸೆ ಯಾರಿಗಿಲ್ಲ ಹೇಳಿ. ಆದರೆ ಮನಸ್ಸು ಕೇಳಬೇಕಲ್ಲ ಯಾವುದೊ ಕೆಟ್ಟ ವಿಚಾರಗಳನ್ನು , ಗತಿಸಿ ಹೋದ ಕೆಟ್ಟ ಗಳಿಗೆಗಳನ್ನು ನೆನೆಯುತ್ತಾ ನೋವೆಂಬ ಮಾಯೆಯನ್ನು ಗೊತ್ತಿಲ್ಲದೇ ಸ್ಪರ್ಶಿಸುತ್ತಾ ಬದುಕನ್ನು ಕಳೆಯುತ್ತಿರುತ್ತೇವೆ. ಬದುಕು ಖುಷಿ ಯಾಗಿರಲು ಸಾವಿರ ಸಾವಿರ ಅವಕಾಶಗಳನ್ನು ಕೊಡುತ್ತೆ! ಅದನ್ನು ನಾವು ಸ್ವೀಕರಿಸಬೇಕು. ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ  ಹೇಳುವಾಗ ನಮ್ಮ ಮನಸ್ಸಿಗೆ ನಾವೇ ಹೇಳಿ ಕೊಳ್ಳಬೇಕು ಈ ದಿನ ಬದುಕು ಹೊಸ ಅವಕಾಶ ನೀಡಿದೆ ಇದನ್ನು ತುಂಬಾ ಚೆನ್ನಾಗಿ, ಖುಷಿ ಖುಷಿಯಾಗಿ ಕಳೆಯಬೇಕು. ಹೊಸ ವಿಷಯಗಳನ್ನು ಕಲಿಯಬೇಕು. ಬದುಕನ್ನು ಕುತೂಹಲ ಕಣ್ಣುಗಳಿಂದ ನೋಡ್ಬೇಕು!  ಹೀಗೆ ನಿಮ್ಮ ಅಂತರಂಗಕ್ಕೆ ಉತ್ಸಾಹದ ಮಾತುಗಳನ್ನು ತುಂಬಿಕೊಂಡು ಹೊಸ ದಿನವನ್ನು ಪ್ರಾರಂಭಿಸಿ.    ಖುಷಿ ಅಂದ್ರೆ ಅದು ನಮ್ಮ ಮನಸ್ಸಿನಲ್ಲಿ ಮೂಡುವ ಮಧುರವಾದ ಭಾವನೆ! ಅದನ್ನು ಬೇರೆ ಯವರಿಂದ ನಿರೀಕ್ಷಿಸಬಾರದು. ಗತಿಸಿಹೋದ ಸಮಯ ಯಾವತ್ತಿಗೂ ಸಿಗುವುದಿಲ್ಲ! ಆದರೆ ಇವತ್ತಿನ ಸಮಯ ನಿಮ್ಮ ಬಳಿ ಇದೆ ! ಅದು ಕಳೆದು ಹೋಗುವ ಮುನ್ನ ಖುಷಿಯಾಗಿರಲು ಪ್ರಯತ್ನಿಸಿ. ನಿಮ್ಮ  ಖುಷಿ ನಿಮ್ಮ  ಕೈಯಲ್ಲೇ ಇದೇ . ನಾಳೆಯ ಬಗ್ಗೆ ಚಿಂತೆಗಿಂತ ಇವತ್ತಿನ ಬದುಕಿನ ಖುಷಿ ಬಹಳ ಮುಖ್ಯ ನೀವು ಖುಷಿಯಿಂದ ಇದ್ದರೇ  ಕುಟುಂಬ ಮತ್ತು ಸ್ನೇಹಿತರು ನಿಮ್ಮ ಜೊತೆ ಖುಷಿ ಖುಷಿಯಾಗಿ ಇರು...

ಗೆಳೆತನ ಬಯಸುವುದು ಕಾಳಜಿ ಮತ್ತು ವಿಶ್ವಾಸವನ್ನು

Image
ಪ್ರತಿಯೊಬ್ಬರಿಗೂ ಗೆಳೆಯರು/ಗೆಳೆತಿಯರು ಇದ್ದೇ  ಇರುತ್ತಾರೆ. ಎಲ್ಲರೂ  ಗೆಳೆತನದಿಂದ ಬಯಸುವುದು ಪ್ರಾಮಾಣಿಕ ಕಾಳಜಿ ಮತ್ತು ವಿಶ್ವಾಸವನ್ನು ಇಂದಿನ ಆಧುನಿಕ ಯುಗದಲ್ಲಿ ಫೇಸ್ ಬುಕ್ , ಟ್ವಿಟರ್ , ವ್ಹಾಟ್ಸಪ್ ಗಳಿಂದ ನಿಜವಾದ ಗೆಳೆತನಗಳು ಮಾಯವಾಗುತ್ತಿದೆ. ಮಾತಿಲ್ಲದ ಪ್ರಪಂಚ ನಿರ್ಮಾಣವಾಗುತ್ತಿದೆ. ಜೊತೆ ಜೊತೆ ಕುಳಿತು ಬೈಟು ಕಾಫಿ ಕುಡಿಯುತ್ತ  ಹರಟೆ ಹೊಡೆದ ಕಾಲ ಇವತ್ತು ನೆನಪು ಮಾತ್ರ .       ನೇರವಾಗಿ ಭೇಟಿ ಮಾಡಿ ಮಾತನಾಡುವ ವ್ಯವಧಾನ ಯಾರಿಗೂ ಇಲ್ಲದಂತಾಗಿದೆ. ಗೆಳೆತನದ ಸುಖವನ್ನು ಅನುಭವವಿಸುವ ಸಮಯ ಮತ್ತು ತಾಳ್ಮೆ ಇಂದಿನ ಯುವ ಜನತೆಗೆ ಇಲ್ಲದಂತಾಗಿದೆ. ಇನ್ನಾದರೂ ಹೆಚ್ಚೆತ್ತು ಕೊಂಡು ಯಾಂತ್ರೀಕೃತ ಪ್ರಪಂಚದಿಂದ ಹೊರಬಂದು ನೈಜ ವಾದ ವಾಸ್ತವದ ಪ್ರಪಂಚದಲ್ಲಿ ಬದುಕುವ ಮನಸ್ಸು ಮಾಡಿ. ಗೆಳೆತನ ಬಯಸುವುದು ಪ್ರಾಮಾಣಿಕ ಕಾಳಜಿ ಮತ್ತು ವಿಶ್ವಾಸವನ್ನು!! -- ನವೀನ್ ರಾಮನಗರ - Add caption