ಏನು ಮಾಡಿದರು ಮನಸ್ಸಿಟ್ಟು ಮಾಡು ಅದೇ ನಿನ್ನ ಯಶಸ್ಸಿನ ಮೊದಲ ಮೆಟ್ಟಿಲು!



ಆತ್ಮೀಯರೇ, 
ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಯಶಸ್ಸನ್ನು ಬೆನ್ನಟ್ಟಿ ಓಡುತ್ತಿದ್ದಾರೆ! ಆದರೆ ಯಶಸ್ಸೆಂಬುದು ಅಷ್ಟು ಸುಲಭವಾಗಿ ಸಿಗುವ ವಸ್ತು ಅಲ್ಲ. ಅದು ಮಾಯ ಚಿಂಕೆಯೇ  ಸರಿ. 
ಯಶಸ್ಸು ಎಂಬುದನ್ನು ಹೀಗೆ ಎಂದೂ  ವಿವರಿಸಲು ಸಾಧ್ಯವಿಲ್ಲ! ಪ್ರತಿಯೊಬ್ಬರು ಒಂದೊಂದು ರೀತಿಯ ಯಶಸ್ಸನ್ನು ಬೆನ್ನಟ್ಟಿರುತ್ತಾರೆ! ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಮೊದಲು ಬರುವುದೇ ಯಶಸ್ಸು ಅನ್ನಿಸಿದರೆ, ವ್ಯಾಪಾರಿಗೆ  ತನ್ನ ವಸ್ತುಗಳನ್ನು ಅತಿ ಹೆಚ್ಚು ಮಾರಾಟ ಮಾಡಿ ಹಣ ಗಳಿಸುವುದೇ ಯಶಸ್ಸು ಆಗಿರುತ್ತದೆ. ಹೀಗೆ ವಿವಿಧ ರೀತಿಯಲ್ಲಿ ಯಶಸ್ಸನ್ನು ಪಡೆಯಲು ಹೊರಟ ಎಲ್ಲರಿಗೂ   ಯಶಸ್ಸು ಸಿಗುವುದಿಲ್ಲ. ಕಾರಣ ಪೂರ್ವ ನಿಯೋಜಿತವಾಗಿ ಗುರಿ ಸ್ಪಷ್ಟವಾಗಿ ನಿರ್ಧರಿಸದೇ  ಇರುವುದು  ಕಾರಣ. 
            
                  ಬಾಲಿವುಡ್ ನ ಖ್ಯಾತ ನಟ ದೇವಾನಂದ್ ಒಮ್ಮೆ ಪತ್ರಿಕೆ ಸಂದರ್ಶನದಲ್ಲಿ ಯಶಸ್ಸಿನ ಬಗ್ಗೆ ಮಾತನಾಡುತ್ತಾ , ಏನು ಮಾಡಿದರು  ಮನಸ್ಸಿಟ್ಟು ಮಾಡು ಅದೇ ನಿನ್ನ ಯಶಸ್ಸಿನ ಮೊದಲ ಮೆಟ್ಟಿಲು! ಅಂತ ತಿಳಿಸಿದ್ದರು. ನಾವು ಯಾವುದೇ ಕೆಲಸ ಮಾಡುತ್ತಿರಲಿ ಅದನ್ನು ಮೊದಲು ಮನಸ್ಸಿಟ್ಟು ಮಾಡುವುದನ್ನು ಕಲಿಯಬೇಕು! ಕಾರಣ ಇವತ್ತಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಓಟದಲ್ಲಿ ಓಡುತ್ತಿದ್ದು! ಕೆಲಸ ಮಾಡುವಾಗ ಏಕಾಗ್ರತೆ ಇರುವುದಿಲ್ಲ! ಕಚೇರಿಯಲ್ಲೇ ಇರಲಿ ಮನೆಯಲ್ಲೇ ಇರಲಿ ನಾವು ಯಾವುದೇ ಕೆಲಸವನ್ನು ಮಾಡುತ್ತಿರಲಿ ಮನಸ್ಸು ಆ ಕೆಲಸದ ಕಡೆ ಸಂಪೂರ್ಣವಾಗಿದ್ದಲ್ಲಿ ,  ಮಾಡುವ ಕೆಲಸದಲ್ಲಿ ಯಶಸ್ಸನ್ನು ನಿರೀಕ್ಷಿಸಬಹುದಾಗಿರುತ್ತದೆ. ಜೊತೆಗೆ ಗುರಿ ನಿರ್ಧರಿಸಿ , ಗುರಿಯೆಡೆಗೆ ಸತತ ಪ್ರಾಮಾಣಿಕ  ಪ್ರಯತ್ನ, ಮತ್ತು ಸಮಯ ಪಾಲನೆ, ಶಿಸ್ತು, ಉತ್ತಮ ಭಾಂದವ್ಯದ ನಡವಳಿಕೆ! ಶ್ರದ್ದೆ, ಇವುಗಳನ್ನು ಮೈಗೂಡಿಸಿಕೊಂಡು ಯಶಸ್ಸನ್ನು ಬೆನ್ನಟ್ಟಿದರೆ ಎಂತಹ ಯಶಸ್ಸನ್ನು ಬೇಕಾದರೂ ಪಡೆಯಬಹುದು!
ಆಗಾದರೆ ತಡ ಏಕೆ ಇನ್ನೂ  ಗುರಿ ನಿರ್ಧರಿಸದಿದ್ದರೆ, ಕೂಡಲೇ ಗುರಿ ನಿರ್ಧರಿಸಿ,  ಯಶಸ್ಸನು ಪಡೆಯಲು ಸಿದ್ದರಾಗಿ. 
ಪ್ರೀತಿಯಿಂದ,
ನವೀನ್, ರಾಮನಗರ 


Comments

Popular posts from this blog

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕೂ ಸವೆಯದ ನೆನಪು

*"ಇರುವ ಭಾಗ್ಯವ ನೆನೆದು ಬಾರೆನೆಂಬುವುದನು ಬಿಡು"*

"ಸಂಸ್ಕಾರವಂತ ತಾಯಿಯೇ ದೇವರು ಆಚಾರವಂತ ಮನೆಯೇ ದೇವಾಲಯ"