"ಸಂಸ್ಕಾರವಂತ ತಾಯಿಯೇ ದೇವರು ಆಚಾರವಂತ ಮನೆಯೇ ದೇವಾಲಯ"
ಒಂದು ದಿನ ಮಗು ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು ತನ್ನ ತಾಯಿಯ ಕೈಗೆ ಒಂದು ಪತ್ರ ಕೊಡುತ್ತಾನೆ, ಅಮ್ಮಾ,
ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ
ಅದನ್ನು ಮಗನಿಗಾಗಿ ಗಟ್ಟಿಯಾಗಿ ಓದುತ್ತಾ
ಆ ತಾಯಿಯ ಕಣ್ಣು ಒದ್ದೆಯಾಯಿತು :"ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ. ನಮ್ಮ ಶಾಲೆ ಅವನ ಬುದ್ಧಿಮತ್ತೆಗೆ ತುಂಬಾ ಸಣ್ಣದು ಹಾಗೂಅವನಿಗೆ ಕಲಿಸಬಲ್ಲಅರ್ಹತೆ ನಮ್ಮ ಯಾವ ಉಪಾಧ್ಯಾಯರಿಗೂ ಇಲ್ಲ. ಆದುದರಿಂದ ಅವನ ವಿದ್ಯಾಭ್ಯಾಸವನ್ನು ನೀವೇ
ಮನೆಯಲ್ಲಿ ಕಲಿಸುವುದು ಒಳಿತು."ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ,ಆಗ ಎಡಿಸನ್ ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ.ಆ ಸಂದರ್ಭದಲ್ಲಿ
ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು
ಬಿಡಿಸಿ ನೋಡಿದರೆ ಅದರಲ್ಲಿ ಹೀಗೆ ಬರೆದಿರುತ್ತದೆ. :
"ನಿನ್ನ ಮಗ ಒಬ್ಬ ಬುದ್ಧಿಮಾಂದ್ಯ, ಅವನನ್ನು ನಾವು ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ,"ತನ್ನ ಮಗುವಿನಮೃದು ಮನಸ್ಸನ್ನು ನೋಯಿಸದಿರಲುಅಂದು ವಿರುದ್ಧವಾಗಿ ಓದಿದತಾಯಿಯನ್ನು ನೆನೆದು ಎಡಿಸನ್ ರು ಗದ್ಗದಿತರಾಗುತ್ತಾರೆ,ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅಳುತ್ತಾರೆ ಮತ್ತು ತಮ್ಮ ದಿನಚರಿಯಲ್ಲಿ ಹೀಗೆ ಬರೆಯುತ್ತಾರೆ:" ಥಾಮಸ್ ಅಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆಅವನ ಶ್ರೇಷ್ಠ ಮಾತೆಯ ದೆಸೆಯಿಂದ ಅವನು ಶತಮಾನದ ಬುದ್ಧಿವಂತನಾಗುತ್ತಾನೆ."
"ಸಂಸ್ಕಾರವಂತ ತಾಯಿಯೇ ದೇವರು
ಆಚಾರವಂತ ಮನೆಯೇ ದೇವಾಲಯ"
ಕೃಪೆ: ಅಂತರ್ಜಾಲ
Comments
Post a Comment