ಖುಷಿಯಾಗಿರಲು ಸಾವಿರ ದಾರಿಗಳಿವೆ!!

ಯಾವಾಗಲೂ ಖುಷಿ ಖುಷಿಯಾಗಿ ಇರಬೇಕೆಂಬ ಆಸೆ ಯಾರಿಗಿಲ್ಲ ಹೇಳಿ. ಆದರೆ ಮನಸ್ಸು ಕೇಳಬೇಕಲ್ಲ ಯಾವುದೊ ಕೆಟ್ಟ ವಿಚಾರಗಳನ್ನು , ಗತಿಸಿ ಹೋದ ಕೆಟ್ಟ ಗಳಿಗೆಗಳನ್ನು ನೆನೆಯುತ್ತಾ ನೋವೆಂಬ ಮಾಯೆಯನ್ನು ಗೊತ್ತಿಲ್ಲದೇ ಸ್ಪರ್ಶಿಸುತ್ತಾ ಬದುಕನ್ನು ಕಳೆಯುತ್ತಿರುತ್ತೇವೆ. ಬದುಕು ಖುಷಿ ಯಾಗಿರಲು ಸಾವಿರ ಸಾವಿರ ಅವಕಾಶಗಳನ್ನು ಕೊಡುತ್ತೆ! ಅದನ್ನು ನಾವು ಸ್ವೀಕರಿಸಬೇಕು. ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಹೇಳುವಾಗ ನಮ್ಮ ಮನಸ್ಸಿಗೆ ನಾವೇ ಹೇಳಿ ಕೊಳ್ಳಬೇಕು ಈ ದಿನ ಬದುಕು ಹೊಸ ಅವಕಾಶ ನೀಡಿದೆ ಇದನ್ನು ತುಂಬಾ ಚೆನ್ನಾಗಿ, ಖುಷಿ ಖುಷಿಯಾಗಿ ಕಳೆಯಬೇಕು. ಹೊಸ ವಿಷಯಗಳನ್ನು ಕಲಿಯಬೇಕು. ಬದುಕನ್ನು ಕುತೂಹಲ ಕಣ್ಣುಗಳಿಂದ ನೋಡ್ಬೇಕು! ಹೀಗೆ ನಿಮ್ಮ ಅಂತರಂಗಕ್ಕೆ ಉತ್ಸಾಹದ ಮಾತುಗಳನ್ನು ತುಂಬಿಕೊಂಡು ಹೊಸ ದಿನವನ್ನು ಪ್ರಾರಂಭಿಸಿ. ಖುಷಿ ಅಂದ್ರೆ ಅದು ನಮ್ಮ ಮನಸ್ಸಿನಲ್ಲಿ ಮೂಡುವ ಮಧುರವಾದ ಭಾವನೆ! ಅದನ್ನು ಬೇರೆ ಯವರಿಂದ ನಿರೀಕ್ಷಿಸಬಾರದು. ಗತಿಸಿಹೋದ ಸಮಯ ಯಾವತ್ತಿಗೂ ಸಿಗುವುದಿಲ್ಲ! ಆದರೆ ಇವತ್ತಿನ ಸಮಯ ನಿಮ್ಮ ಬಳಿ ಇದೆ ! ಅದು ಕಳೆದು ಹೋಗುವ ಮುನ್ನ ಖುಷಿಯಾಗಿರಲು ಪ್ರಯತ್ನಿಸಿ. ನಿಮ್ಮ ಖುಷಿ ನಿಮ್ಮ ಕೈಯಲ್ಲೇ ಇದೇ . ನಾಳೆಯ ಬಗ್ಗೆ ಚಿಂತೆಗಿಂತ ಇವತ್ತಿನ ಬದುಕಿನ ಖುಷಿ ಬಹಳ ಮುಖ್ಯ ನೀವು ಖುಷಿಯಿಂದ ಇದ್ದರೇ ಕುಟುಂಬ ಮತ್ತು ಸ್ನೇಹಿತರು ನಿಮ್ಮ ಜೊತೆ ಖುಷಿ ಖುಷಿಯಾಗಿ ಇರು...